ಗುರುದೇವ

 

ಗುರುದೇವ




ಈ ಬದುಕೆಂಬ ಸಾಗರದಿ

ತೇಲುವ ದೋಣಿ ನಾನ್ನಯ್ಯ||

ನನಗೆ ನೀನೇ ದಿಕ್ಕು ಅಯ್ಯಾ

ನಿನ್ನ ಸೇರುವುದೇ ನನ್ನ ಗುರಿ ಅಯ್ಯಾ ||

ಸಾಗರದ ಆಚೆ ನಿಂತಿರುವೆ ನೀನು

ನಿನ್ನನ್ನು ಕಾಣಲು ಹಂಬಲಿಸಿದೆ ನಾನು||

ಎದುರಿಸಿ ಕಡಲ ಅಲೆ-ಅಲೆಗಳನ್ನು

ದಡಮುಟ್ಟಿ ಸೇರಬೇಕು ನಾನು ನಿನ್ನನ್ನು||

ಕೊಡು ಬುದ್ಧಿ ದಾಟಲು ಸಾಗರವನ್ನು

ತಲುಪಿಯೇ ತೀರುವೆ ನಾನು ನಿನ್ನನ್ನು||

ನನ್ನ ಭಕ್ತಿಗೆ ಅರ್ಥವಿಲ್ಲವೇನು?

ದರುಶನವ ನೀಡಿ ಕೃಪೆ ತೋರಿ ಗುರುದೇವ||


ಬಂಧುಗಳೇ ನಾನೆನು ಸಾಹಿತಿಯಲ್ಲ, ಕವಿಯಲ್ಲಾ ನಾನೊಬ್ಬ ಸಾಹಿತ್ಯಪ್ರಿಯ ಸಾಹಿತ್ಯದ ಕಡೆ ಒಲವು ಇಟ್ಟುಕೊಂಡವನ್ನು ಹಾಗಾಗಿ ನನಗೆ ತಿಳಿದಷ್ಟು ಮಟ್ಟಿಗೆ ಕವನಗಳನ್ನು ರಚಿಸುತ್ತಿರುವೆ ತಪ್ಪಾಗಿದಲ್ಲಿ ದಯವಿಟ್ಟು ಕ್ಷಮಿಸಿರಿ. 

ಇಂತಿ ನಿಮ್ಮ ಬಿ.ಎಸ್.ಕೆಂಗನಾಳ

Post a Comment

Previous Post Next Post