ಜೀವನ ಎಂದರೆ ಏನು? ಅದು ಹೇಗೆ?

ಹಾಯ್ , ಸ್ನೇಹಿತರೆ !

ಎಲ್ಲರಿಗೂ ನನ್ನ ನಮಸ್ಕಾರಗಳು 🙏🙏

     ನಾನು ನಿಮ್ಮ ಬಿ.ಎಸ್. ಕೆಂಗನಾಳ 19 ವಯಸ್ಸಿನ ಯುವ ತರುಣ. ನಾನೊಬ್ಬ ನರ್ಸಿಂಗ್ ವಿದ್ಯಾರ್ಥಿಯಾಗಿದ್ದು, ಕಾಲೇಜು  ಕಲಿಯುತ್ತಲೇ ಸಾಹಿತ್ಯದ ಕಡೆ ಒಲವು ಇಟ್ಟುಕೊಂಡವನು. ಇದು ನನ್ನ ಜೀವನದ ಮೊದಲನೆಯ ಅಂಕಣ ಬರೆಯುತ್ತಿರುವೆ, ಏನು ಬರೆಯಬೇಕು? ಹೇಗೆ ಬರೆಯಬೇಕು? ಎಂದು ನನ್ನಲ್ಲಿ ಸ್ವಲ್ಪ ಆತಂಕ ಒಂದು ಮೂಡಿದೆ. ಆದರೂ ಜೀವನ ಎಂಬ ಒಂದು ವಿಷಯದ ಮೇಲೆ ನನಗೆ ತಿಳಿದಷ್ಟು ಮಟ್ಟಿಗೆ ಬರೆಯುತ್ತಿರುವೆ. 

ನಾವು ಜೀವನ ಅಂತ ಯಾವಾಗ ಕರೆಯುತ್ತೇವೆ? ನಿಮಗೆ ಏನಾದರೂ ಗೊತ್ತಾ? 

ಜೀವನ ಎಂದರೆ ಜನನ, ಮರಣ, ನೋವು, ನಲಿವು, ಕೋಪ, ತಾಪ, ನೆಮ್ಮದಿ, ಐಶ್ವರ್ಯ, ಬಡತನ, ಮತ್ತು ಇತ್ಯಾದಿ ಎಲ್ಲವೂ ಸೇರಿದಾಗ ಒಂದು ಬದುಕು ಅಥವಾ ಜೀವನ ಅಂತ ಕರೀತೇವೆ. ಜೀವನದಲ್ಲಿ ಮನುಷ್ಯ ಎಡವುದು ಸಹಜ ,ಏಕೆಂದರೆ ನಾವು ಬಿದ್ದಾಗಲೇ ಮೆಲೆಳಲು ಸಾಧ್ಯ. ಜೀವನದಲ್ಲಿ ನಾವು ಬೀಳುತ್ತಿರಬೇಕು ಮತ್ತೆ ಮೇಲೆ ಏಳುತ್ತಿರಬೇಕು ಆದರೆ ಮತ್ತೆ ಮೇಲೆಳಲು ಸಾಧ್ಯವಾಗದಷ್ಟು ಬೀಳಬಾರದು ನಮ್ಮ ಬದುಕು ನಮ್ಮ ಕೈಯಲ್ಲಿದೆ. ನಾವು ಆಯ್ಕೆ ಮಾಡುವ ನಿರ್ಧಾರಗಳ ಮೇಲೆ ಅವಲಂಬನೆಯಾಗಿರುತ್ತದೆ. ನಾವು ಈ ಸಮಾಜದಲ್ಲಿ ಒಂದು ಸ್ಥಾನಗಳಿಸಿರುತ್ತೇವೆ ಅದನ್ನು ಉಳಿಸಿಕೊಳ್ಳುವುದರಲ್ಲಿರುತ್ತದೆ. ಜೀವನ ಎಂದರೆ ನಾವು ಎಷ್ಟೇ ಹೇಳಿದರೂ ಮುಗಿಯದಸ್ಟು, ಎಷ್ಟೇ ಬರೆದರೂ ಸಾಲದಷ್ಟು, ಸಾಕಷ್ಟು ವಿಷಯಗಳನ್ನು ಒಳಗೊಂಡಿರುತ್ತದೆ. ಅವುಗಳನ್ನು ನಾವು ಹುಟ್ಟಿನಿಂದ ಕಲಿಯುತ್ತಿದ್ದೇವೆ. ಈಗಲೂ ಕಲಿಯುತ್ತಾ ಇದ್ದೇವೆ ಮತ್ತು ನಾವು ಸಾಯುವವರೆಗೂ ಕಲೆಯುವ ಮತ್ತು ಕಲಿಸುವ ಒಂದು ಜ್ಞಾನವೇ ಜೀವನ. ಇದಕ್ಕೆ ಯಾವುದೇ ಲಿಪಿ ಇಲ್ಲ, ಯಾವುದೇ ಭಾಷೆ ಇಲ್ಲ, ಇದನ್ನು ಯಾರು ಸಹ ಶೋಧನೆ ಮಾಡಿಲ್ಲ ಅದುವೇ ಜೀವನ.

 ಗೆಳೆಯರೇ ಇದು ನನ್ನ ಮೊದಲನೇ ಅಂಕಣ ಆಗಿರುವುದರಿಂದ ಚಿಕ್ಕದಾಗಿ ಬರೆಯುತ್ತಿರುವೆ ತಪ್ಪಾದಲ್ಲಿ ದಯವಿಟ್ಟು ಕ್ಷಮಿಸಿರಿ,

 ಇದನ್ನು ಓದಿದ ನಿಮಗ್ಗೆಲ್ಲಾ ನನ್ನ ಅನಂತ ಕೋಟಿ ಧನ್ಯವಾದಗಳು.

ಮತ್ತೇ ಮುಂದಿನ ಅಂಕಣದೊಂದಿಗೆ ನಮ್ಮ ನಿಮ್ಮ ಬೇಟಿ, 

ಮತ್ತೋಮ್ಮೆ ಎಲ್ಲಾರಿಗೂ ನಮ್ಮಸ್ಕಾರಗಳು.

Post a Comment

Previous Post Next Post